ನೀಲಕಾಂತಿ (ಉರುಳಿಗ) Indian Roller, Blue Jay (Coracias benghalensis)
ನೀಲಕಾಂತಿ ಹಕ್ಕಿಯೂ ಕರ್ನಾಟಕ, ಆಂಧ್ರಪ್ರದೇಶ, ಬಿಹಾರ ಹಾಗೂ ಒಡಿಶಾ ರಾಜ್ಯಗಳ ರಾಜ್ಯ ಪಕ್ಷಿಯಾಗಿ ಗುರುತಿಸಿಕೊಂಡಿದೆ.
ಮೈನಾಗಿಂತ ದೊಡ್ಡದಾದ ಪಾರಿವಾಳಕ್ಕಿಂತ ಚಿಕ್ಕದಾದ ನೀಲಿ ಬಣ್ಣದ ಹಕ್ಕಿಯನ್ನು ಕನ್ನಡದಲ್ಲಿ
ಉರುಳಿಗ, ನೀಲಕಂಠ, ನೀಲಕಾಂತಿ ಎಂದ ಕರೆಯುತ್ತಾರೆ. ಈ ಹಕ್ಕಿ ಅಪರೂಪವೇನಲ್ಲ, ಈ
ಪಕ್ಷಿ ಭಾರತ ಉಪಖಂಡದಾದ್ಯಂತ ಕಾಣಿಸುತ್ತದೆ. ಗ್ರಾಮೀಣ ಪ್ರದೇಶದ ಜಮೀನುಗಳ ಬಳಿ ಹಲವು ಬಾರಿ ಕಂಡಿದ್ದೇನೆ, ಮೈಸೂರಿನ
ರಿಂಗ್ ರಸ್ತೆಯಲ್ಲಿ ಸಂಚರಿಸಿದರೆ ತಂತಿಯ ಮೇಲೆ ಬೆಪ್ಪನಂತೆ ಕುಳಿತಿರುವುದನ್ನು ಕಾಣಬಹುದು.
ನೆತ್ತಿ, ರೆಕ್ಕೆ, ತಿಳಿ
ನೀಲಿ, ಕತ್ತು ಬೆನ್ನು ಎದೆ ಕಂದು, ಕುಳಿತಲ್ಲಿಂದ ಹಾರಲು ಮೇಲೆದ್ದೊಡನೆ ಉಜ್ವಲವಾದ ಕಡು, ತಿಳಿ ನೀಲಿ
ಬಣ್ಣದ ರೆಕ್ಕೆಗಳೂ ಕಾಣಲು ಎರಡು ಕಣ್ಣು ಸಾಲದು. ಸಂಗಾತಿಯನ್ನು ಆಕರ್ಷಿಸಲು ಆಗಸದಲ್ಲಿ ಗಿರಿಕಿ, ಲಾಗ
ಹಾಕುವುದರಿಂದ ಇದಕ್ಕೆ ಉರುಳಿಗ ಎಂದು ಹೆಸರು ಬಂದಿದೆ. ಈ ಹಕ್ಕಿಗೆ ನೀಲಕಾಂತಿ, ಉರುಳಿಗ ಎಂದು ಕರೆಯುವುದರಲ್ಲಿ
ಅರ್ಥವಿದೆ ಆದರೆ ನೀಲಕಂಠ ಎನ್ನುವುದು ಯಾಕೋ ಸರಿ ಎನಿಸುವುದಿಲ್ಲ. ಕಂಠ ಮಾತ್ರ ನೀಲಿ ಇದ್ದರೆ ಹಾಗೆ
ಕರೆಯುವುದು ಸರಿ ಎನ್ನುವುದು ನನ್ನ ಭಾವನೆ.
ಉದ್ದ
ಕೊಕ್ಕಿನ ತುದಿ ಹುಕ್‌ನಂತೆ ಬಾಗಿದ್ದು, ಕೀಟಗಳನ್ನು ಹೆಕ್ಕಿ ತಿನ್ನಲು ಅನುಕೂಲಕರವಾಗಿದೆ. ವ್ಯವಸಾಯ
ಪ್ರದೇಶಗಳ ಸುತ್ತ-ಮುತ್ತ ವಾಸ. ತಂತಿ, ಕಂಬ ಅಥವಾ ಬಂಡೆಯ ಮೇಲೆ ಕುಳಿತು ಬೇಟೆಗೆ ಹೊಂಚು
ಹಾಕುತ್ತದೆ. ನೆಲದ ಮೇಲೆ ಹರಿದಾಡುವ ಜಂತು, ಕೀಟಗಳು ಇದರ ಆಹಾರ. ಬೆಪ್ಪನಂತೆ ಕುಳಿತಿದ್ದರೂ ಒಮ್ಮೊಮ್ಮೆ ಗಟ್ಟಿಯಾಗಿ ಖಕ್...ಖಕ್... ಕಕರ್ಶವಾಗಿ ಕೂಗುತ್ತದೆ. ಮಾರ್ಚ್
ನಿಂದ ಜುಲೈ ಒಳಗೆ ಸಂತಾನೋತ್ಪತ್ತಿಯಲ್ಲಿ ತೊಡಗುವ ಈ ಹಕ್ಕಿ ಪೊಟರೆಯಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ
ಗೂಡುಕಟ್ಟಿ,೪ ಅಥವಾ ೫ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ೧೭ ದಿನಗಳವರೇಗೆ ಕಾವು ಕೊಟ್ಟು
ಮರಿಮಾಡುತ್ತದೆ. ಹೆಣ್ಣು ಗಂಡುಗಳೆರಡೂ ಸರದಿಯಂತೆ ಕಾವು ಕೊಡುತ್ತವೆ.
ಚಿತ್ರ ಸಹಕಾರ ಇಂಟರ್ ನೆಟ್
ಗುರು ಪ್ರಸಾದರೆ ಒಳ್ಳೆ ಉಪಕ್ರಮವು, ಶುಭ ಹಾರೈಸುವ,
ReplyDelete- ಸ್ವರೂಪ್ ಭಾರದ್ವಾಜ್
http://swaroopbharadwaj.blogspot.com