ನೆಲಕುಟುಕ, ಚಂದ್ರಮುಕುಟ Common Hoopoe (Upupa epops)
ಈ ಹಕ್ಕಿಯನ್ನು ಯಾರಿಗಾದರೂ
ತೋರಿಸಿದರೆ ಪ್ರತಿಯೊಬ್ಬರೂ ಇದನ್ನು ಮರಕುಟುಕು ಎಂದೇ ಹೇಳುತ್ತಾರೆ. ಆದರೆ ಇದು ನಿಜವಾಗಿಯೂ
ಮರಕುಟುಕನಲ್ಲ. ಇದು ಮರ ಕುಟ್ಟುವುದಿಲ್ಲ ನೆಲ ಕೆದುಕುತ್ತದೆ. ಬಯಲು ಪ್ರದೇಶ, ತೆಳು ಕಾಡುಗಳಲ್ಲಿ
ಮತ್ತು ತೋಟಗಳಲ್ಲಿ, ನೆಲದ ಮೇಲೆ ಕ್ರಿಮಿ-ಕೀಟಗಳಿಗಾಗಿ ಕೆದಕುತ್ತ ಅಡ್ಡಾಡುತ್ತವೆ.ಹಳೆಯದಾದ
ದನದಸೆಗಣಿಯನ್ನು ಬೆದುಕುತ್ತಿರುತ್ತವೆ. ರೈತರ ಬೆಳೆಗಳಿಗೆ ಪೀಡೆಯಾಗುವ ಹಲವು ಕೀಟಗಳನ್ನು ತಿನ್ನುತ್ತವೆಯಾದ್ದರಿಂದ
ರೈತಸ್ನೇಹಿಯಾಗಿದೆ.
ಮೈಮೇಲೆ ಬಿಳಿಕಪ್ಪು
ಝಿಬ್ರಾದಂತ ಪಟ್ಟಿಗಳಿದ್ದು, ಎದೆ ಮತ್ತು ಕತ್ತಿನಲ್ಲಿ ಕೇಸರಿ ಬಣ್ಣವಿದ್ದು ಅತ್ಯಂತ
ಸುಂದರವಾಗಿದೆ.ಇದರ ತಲೆಮೇಲೆ ಬೀಸಣಿಗೆಯಂತಹ ಜುಟ್ಟು ಆಕರ್ಷಕವಾಗಿದೆ. ಜುಟ್ಟಿನ ತುದಿಯಲ್ಲಿ
ಕಪ್ಪು ಮಚ್ಚೆಗಳಿವೆ. ಅತ್ತಿತ್ತ ತಿರುಗುವಾಗ, ಒಂದೊಂದು ಸಾರಿಗೂ ಶಿಖೆಯನ್ನು ತೆಗೆದು ಮುಚ್ಚುತ್ತಿರುತ್ತವೆ.
ಕುಳಿತಾಕ್ಷಣ ಅರ್ಧ ಚಂದ್ರಾಕೃತಿಯಲ್ಲಿ ಜುಟ್ಟು ತೆರೆದುಕೊಳ್ಳುವುದರಿಂದ ಚಂದ್ರಮುಕುಟ ಅಂತಲೂ
ಕರೆಯುತ್ತಾರೆ. ಇದು ಹೂ ಹ್ಹು ಹ್ಹ…ಉಪ್ಪುಪ್ಪೋ..ವಿಶೇಷವಾದ
ಧ್ವನಿ ಹೊರಡಿಸುವುದರಿಂದ ಇದಕ್ಕೆ ಇಂಗ್ಲಿಷ್ ನಲ್ಲಿ ಹೂಪೂ ಎಂತಲೇ ಹೆಸರಾಗಿದೆ. ತಲೆಯ ಮೇಲೆ
ಪುಕ್ಕವಿರುವುದರಿಂದ ಇದಕ್ಕೆ ಬಾಸಿಂಗ ಹಕ್ಕಿ, ಬಸವನಕೋಡು, ಜುಟ್ಲು ಎಂತೆಲ್ಲ ಕರಿತಾರೆ. ಪೊಟರೆ
ಕಲ್ಲುಗಳ ಸಂದುಗಳಲ್ಲಿ ಗೂಡು ಮಾಡಿ ಫೆಬ್ರವರಿಯಿಂದ ಮೇ ವರೆಗೆ 5-6 ಮೊಟ್ಟೆಗಳನ್ನು ಇಟ್ಟು ಕಾವು
ಕೊಡುತ್ತದೆ.
ಕೆಳಗಿನ ಪ್ಯಾರಾವೂ ಪೂರ್ಣಚಂದ್ರ ತೇಜಸ್ವಿ ಅವರ ಮಿಂಚುಳ್ಳಿ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.
ಮರಕುಟುಕನ ಹಕ್ಕಿ ಮರಿಗಲನ್ನು
ನೋಡಲು ನಾವು ಷೆಡ್ಡಿನ ಮೇಲೆ ಹತ್ತಿ ಸೂರಿನ ತೂತಿನೊಳಗೆ ಆಗಾಗ್ಗೆ ಇಣುಕುತ್ತಿದ್ದೆವು. ಆಗೆಲ್ಲಾ
ಆ ಮರಿಗಳೂ ಸಹ ಹಾವಿನ ಹೆಡೆ ಮಾದರಿಯಲ್ಲಿ ತಲೆಯಾಡಿಸುತ್ತಾ ಸಿರ್ರ್ ಎಂದು ಶಬ್ದಮಾಡಿ ನಮ್ಮನ್ನು
ಹೆದರಿಸುತ್ತಿದ್ದವು. ಅಷ್ಟಲ್ಲದೆ ಅಪರಿಚಿತರು ಯಾರಾದರೂ ಗೂಡಿನಬಳಿಗೆ ಹೋದರೆ ಸಾಕು ಅವು ತಮ್ಮ
ಬಾಲದಲ್ಲಿರುವ ಗ್ರಂಥಿಗಳಿಂದ ದುವಾರ್ಸನೆ ಹೊಮ್ಮಿಸುತ್ತಿದ್ದವು.
ಚಿತ್ರಕೃಪೆ ಅಭಿಷೇಕ್ ಎಂಬಿ.
No comments:
Post a Comment