ನವರಂಗ Pittas (Pittidae)
ಹೆಸರೆ ಸೂಚಿಸುವಂತೆ ಹಲವು ಬಣ್ಣಗಳಿಂದ ಕೂಡಿರುವ ಈ ನವರಂಗ ಪಕ್ಷಿಯ ಸ್ಥಳೀಯ ಹಕ್ಕಿಯಲ್ಲ. ನೆಲಗುಪ್ಪ, ಹನಾ ಚಳಿಯಿಂದ ಪಾರಾಗಲು ಹಿಮಾಲಯದ ಕಡೆಯಿಂದ ಕಾಶ್ಮೀರ, ಅಸ್ಸಾಂ, ಅರುಣಾಚಲಪ್ರದೇಶ, ಲಡಾಕ್ ಮುಂತಾದ ಕಡೆಯಿಂದ ಸಾವಿರಾರು ಕಿಲೋಮೀಟರ್ ಕ್ರಮಿಸಿ ನವಂಬರ್ ನ ಹೊತ್ತಿಗೆ ದಕ್ಷಿಣ ಭಾರತ, ಶ್ರೀಲಂಕಾದವರೆಗೂ ವಲಸೆ ಬರುತ್ತವೆ. ನಂತರ 4-5 ತಿಂಗಳು ಇದ್ದು ಮರಳುತ್ತದೆ.ಮೈನಾಕ್ಕಿಂತ ಚಿಕ್ಕದಾದ ಗುಬ್ಬಿಯಷ್ಟು ಗಾತ್ರದ ಪಕ್ಷಿ ನೆಲದ ಮೇಲೆ, ಕುಪ್ಪಳಿಸಿಕೊಂಡು, ತರಗೆಲೆಗಳನ್ನು ಮೊಗಚುತ್ತಾ, ಬಾಲವನ್ನು ಮೇಲೆಕ್ಕೂ-ಕೆಳಕ್ಕೂ ಆಡಿಸುತ್ತಾ ಬೇಟೆ ಹುಡುಕುತ್ತವೆ. ದೇಹದ ಆಕಾರಕ್ಕೆ ಹೋಲಿಸಿದರೆ ಉದ್ದವೆನಿಸುವ ಕಾಲುಗಳನ್ನು ಹೊಂದಿರುವ ಇವು ಹಾರುವುದಕ್ಕಿಂತ ನೆಲದ ಮೇಲೆ ಕುಪ್ಪಳಿಸಿ ಕುಪ್ಪಳಿಸಿ ಓಡಾಡುವುದೇ ಹೆಚ್ಚು. ಕುಪ್ಪಳಿಸುತ್ತಾ ಕ್ರಮಿಸುವುದನ್ನು ಕಂಡಾಗ ಈ ಹಕ್ಕಿಯೂ ಸಾವಿರಾರು ಕಿಲೋ ಮೀಟರ್ ಹಾರಿ ಬರುವುದರ ಬಗ್ಗೆ ಅಚ್ಚರಿಯಾಗುತ್ತದೆ.
ಈ ಹಕ್ಕಿಯ ಎದೆ ಮತ್ತು ಹೊಟ್ಟೆ ಕಂದು ಹಳದಿ ಬಣ್ಣವನ್ನು ಹೊಂದಿದ್ದು, ರೆಕ್ಕೆಯು ಹಸಿರು ಬಣ್ಣವನ್ನು ಹೊಂದಿರುತ್ತದೆ. ಕಣ್ಣಿನಿಂದ ಕತ್ತಿನ ಮೇಲ್ಬಾಗದ ವರೆಗೆ ಕಪ್ಪು ಪಟ್ಟಿ ಇರುತ್ತದೆ. ಕತ್ತಿನ ಮುಂಭಾಗದಲ್ಲಿ ಬಿಳಿ ಬಣ್ಣವಿರುತ್ತದೆ. ಬಾಲದ ಕೆಳಭಾಗದಲ್ಲಿ ರಕ್ತಗೆಂಪು ಬಣ್ಣದಿಂದ ಹೊಳೆಯುತ್ತದೆ.
ಬಾಲದ ತುದಿಯಲ್ಲಿರುವ ನೀಲಿ ಬಣ್ಣವು ರೇಡಿಯಂ ತರಹ ಕಾಣುತ್ತದೆ ಅದನ್ನು ನೋಡುವುದೆ ಒಂದು ಚೆಂದ ಅಂತಾರೆ Shylajesha Raja
ವೀತ್ ತ್ಯೂ…ವೀತ್ ತ್ಯೂ..ಎಂದು ಕೂಗುವ ಈ ಹಕ್ಕಿಗಳು ಕ್ರಿಮಿ ಕೀಟಗಳು ಮತ್ತು ಮರಿ ಹುಳುಗಳನ್ನು ಆಹಾರವಾಗಿ ಸೇವಿಸುತ್ತವೆ. ಹುಲ್ಲು, ಕಡ್ಡಿ, ನಾರುಗಳಿಂದ ಬಟ್ಟಲಿನಕಾರಾದ ಗೂಡನ್ನು ಪೊದೆಗಳ ಕವಲುಗಳಲ್ಲಿ ಕಟ್ಟುತ್ತವೆ. ಹಿಮಾಲಯದ ಕಾಡುಗಳಲ್ಲಿ ಮೇ ಯಿಂದ ಆಗಷ್ಟ್ನಲ್ಲಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡುವ ಇವು ಚಳಿಗಾಲದಲ್ಲಿ ದಕ್ಷಿಣಭಾರತದ ಹಲವು ಪ್ರದೇಶಗಳಿಗೆ ವಲಸೆ ಬರುತ್ತವೆ. ಪಿಟ್ಟ (Pitta) ಎನ್ನುವ ಹೆಸರು ಹೆಸರು ತೆಲುಗಿನ ಪಿಟ್ಟ ಶಬ್ದದಿಂದ ಬಂದಿದೆ ಎನ್ನಲಾಗಿದೆ. ಹಲವು ಭಾಷೆಗಳಲ್ಲಿ ಇದು ನವರಂಗ ಎಂದೆ ಕರೆಸಿಕೊಂಡಿದೆ.
ಪಕ್ಷಿ ವೀಕ್ಷಕರಿಗೆ ಜನವರಿ ಫೆಬ್ರವರಿಯಲ್ಲಿ ಹುಡುಕುವುದೇ ಒಂದು ಕೆಲಸ. ಮೈಸೂರಿನ ಚಾಮುಂಡಿಬೆಟ್ಟ ಮತ್ತು ಕುಕ್ಕರಹಳ್ಳಿ ಕೆರೆ ಅಂಗಳದ ಪೊದೆಗಳಲ್ಲಿ ಈ ಹಕ್ಕಿಯನ್ನು ಕಂಡವರಿದ್ದಾರೆ. ಆದರೆ ನೋಡಿಕೊಂಡು ಬಂದವರು ಮತ್ತೊಬ್ಬರಿಗೆ ತೋರಿಸಲು ಹಿಂಜರಿಯುತ್ತಾರೆ. ಫೋಟೋಗ್ರಫಿಗಾಗಿ ಮತ್ತಷ್ಟು ಜನರನ್ನು ಕರ್ಕೊಂಡು ಬರ್ತಾರೆ ಅಂತ ಭಯ ಆದರೆ ಇವರಿಗೂ ಮತ್ತೊಬ್ಬರು ಆ ಹಕ್ಕಿ ಬಗ್ಗೆ ಹೇಳಿಕೊಟ್ಟಿದ್ದಾರೆ ಎಂದು ಮರೆತು ಸ್ವಾರ್ಥ ಪ್ರದರ್ಶಿಸುತ್ತಾರೆ.
ಚಿತ್ರ ಕೃಪೆ-Abhishek Coorg ಅವರು ಕೊಡಗಿನ ವಿರಾಜಪೇಟೆಯ ಬಳಿ ಈ ಚಿತ್ರವನ್ನು ತೆಗೆದಿದ್ದು, ನನಗೆ ಮೊದಲೆ ಚಿತ್ರ ಕೊಟ್ಟಿದ್ದರು.
No comments:
Post a Comment